ಮಕ್ಕಳಲ್ಲಿ ಕಲಿಕೆಯು ದೃಢ ವಾಗಬೇಕಾದರೆ ಪಠ್ಯ ವಿಷಯದ ಬೋಧನೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳು ಮಹತ್ವದ ಸ್ಥಾನವನ್ನು ವಹಿಸುತ್ತದೆ. ಅದರಂತೆ ರಸಪ್ರಶ್ನೆಗಳು ಸಹ ಮಕ್ಕಳಲ್ಲಿ ಕಲಿಕೆಯನ್ನು ಸದೃಢಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕನ್ನಡ --ಒಂದನೇ ತರಗತಿ ೧) ರ ಗ ಸ_ _ಪೂರ್ತಿಗೊಳಿಸಿ. ೨) ಆನೆಗೆ ಇರುವ ಇನ್ನೊಂದು ಹೆಸರು. ೩) ಈ ಅಕ್ಷರಗಳಿಂದ ಪ್ರಾರಂಭವಾಗುವ ಪದಗಳನ್ನು ಬರೆ ಜ___. ಸ___. ಗ___ ತ___. ನ_____. ಮ__ ೪) ನಮ್ಮ ನಾಡ ಹಬ್ಬ ಯಾವುದು? ೫) ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ. **ದಸರಾ ಅರಸರ *. **ಮರ ವನದ ಕನ್ನಡ ಎರಡನೇ ತರಗತಿ ೧) ಹೊಲದಲ್ಲಿ ದುಡಿಯುವವರಿಗೆ ಏನೆನ್ನುವರು? ೨) ಗುಂಪಿಗೆ ಸೇರದ ಅಕ್ಷರ ಗುರುತಿಸಿ ** ರಾ, ಜಾ, ನ, ಲಾ. **ಗಿ, ಮಿ, ಲೆ, ಸಿ **ಕು, ಚು, ಡು, ಕೂ ೩) ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ **ಅಜ್ಜಿ ತಿಂದಳು ಕಜ್ಜಾಯ. **ಅಣ್ಣನು ಮಾಡಿದ ಗಾಳಿಪಟ ಬಣ್ಣದ **ಹೋಗುವನು ಶಾಲೆಗೆ ಪ್ರಜ್ವಲ್. ೪) ಈ ಕೆಳಗಿನ ಒತ್ತಕ್ಷರಗಳಿಗೆ ಪದಗಳನ್ನು ರಚಿಸಿ ಕ್ಕ,,, ನ್ನ,, ಲ್ಲ,, ಸ್ಸ,,, ದ್ದ,, ಬ್ಬ. ಮೂರನೆಯ ತರಗತಿ __ಕನ್ನಡ ೧) ಬಾವಿಯಲ್ಲಿ ಯಾರ ಪ್ರತಿಬಿಂಬ ಕ...